ಅನಂತಮೂರ್ತಿಯವರ ಕೃತಿಗಳಲ್ಲಿ `ಹಡೆ' ಪಾತ್ರಗಳು
`ಹಡೆ' ಪಾತ್ರಗಳ ಕುರಿತು ಅನಂತಮೂರ್ತಿಯವರಿಗೆ ಏನೋ ಒಂದು ವಿಶೇಷ ಆಕರ್ಷಣೆ, ಕುತೂಹಲವಿದ್ದಂತಿದೆ. ಅದೇಕೆ ಹಾಗೆ ಎಂದು ನನಗೂ ಕೆಟ್ಟ ಕುತೂಹಲ. ಈ ವಿಷಯದ ಬಗ್ಗೆ ಬರೆಯಬೇಕೆಂದು ಹಲವು ಸಲ ಚಿಂತಿಸಿ ವ್ಯವಧಾನ ಸಾಲದೇ ತಳ್ಳಿಹಾಕಿದ್ದೆ. ಉದಯವಾಣಿಯ ಋಜುವಾತು ಅಂಕಣದ ನಂಜುಂಡಸ್ವಾಮಿಯವರ ಕುರಿತ ವ್ಯಕ್ತಿಚಿತ್ರದಲ್ಲಿ `ಆಚಾರ'ರ ಚಿತ್ರಣವನ್ನು ಓದುತ್ತಿದ್ದಂತೆ, ಆ ನನ್ನ ಹಳೆಯ ಹಂಬಲ ಮತ್ತೆ ಜಾಗ್ರತವಾಯಿತು. ಈ ಸಂದರ್ಭದಲ್ಲಿ ವ್ಯಕ್ತಿಚಿತ್ರದ ಬಗ್ಗೆ ಒಂದು ಮಾತು ಹೇಳದೆ ಮುಂದೆ ಹೋಗಲಾರೆ. ವ್ಯಕ್ತಿಚಿತ್ರದ ಪ್ರಾಕಾರದಲ್ಲಿ ಅನಂತಮೂರ್ತಿ ಅವರಿಗೊಂದು ವಿಶೇಷ ಶಕ್ತಿಯಿದೆ. ಬೇಂದ್ರೆ, ಗೋಪಾಲಗೌಡರು, ವಿ.ಸೀತಾರಾಮಯ್ಯ, ಆಚಾರ್ಯ ಕೃಪಲಾನಿ ಇವರನ್ನೆಲ್ಲಾ ಅನನ್ಯವೆನ್ನಿಸುವ ರೀತಿಯಲ್ಲಿ ನಮಗೆ ಕಾಣಿಸಿದ್ದಾರೆ. ನಂಜುಂಡಸ್ವಾಮಿಯವರ ಬಗೆಗಿನ ವ್ಯಕ್ತಿಚಿತ್ರ ಕೂಡಾ ಅದೇ ಸಾಲಿಗೆ ಸೇರುತ್ತದೆ.
ಅನಂತಮೂರ್ತಿ ಅವರ ಕೃತಿಯ `ಹಡೆ' ಪಾತ್ರಗಳನ್ನು ಚರ್ಚಿಸುವ ಮೊದಲು, `ಹಡೆ' ಪದದ ಅರ್ಥವ್ಯಾಪ್ತಿಯನ್ನು ವಿಶ್ಲೇಷಿಸಲು ಪ್ರಯತ್ನಿಸುತ್ತೇನೆ. ಈ ಪದ ಮನಸ್ಸಿಗೆ ಹೊಳೆಯಿಸುವ ಪ್ರತಿಮೆ ಎಂತಹುದು?
`ಹಡೆ' ಪಾತ್ರವೆಂದರೆ ಸಾಮಾನ್ಯವಾಗಿ ನಾನು ಗುರುತಿಸಿದಂತೆ ಸ್ವತಃ ತನ್ನ ಅಧಿಕಾರ, ಶಕ್ತಿ, ಸ್ಥಾನಮಾನಗಳ ಕುರಿತು ಎಚ್ಚರವಿಲ್ಲದ, ಅವುಗಳನ್ನು ಪಡೆಯಬೇಕೆಂಬ ಹಂಬಲವಿಲ್ಲದ ವ್ಯಕ್ತಿ. ಜೊತೆಗೇ ತನ್ನ ಎದುರಿಗೆ ಇರುವುವರ ಶಕ್ತಿ, ಅಧಿಕಾರ, ಸ್ಥಾನಮಾನಗಳನ್ನು ಲೆಕ್ಕಕ್ಕೆ ತಾರದೇ ವರ್ತಿಸಬಲ್ಲ ಪಾತ್ರ. ಒಂದು ಕೋನದಿಂದ ನೋಡಿದಾಗ ವ್ಯವಹಾರಿಕ ಕೌಶಲ್ಯವಿಲ್ಲದ ಹ್ಯಾಪನಂತೆ ಕಂಡುಬಂದರೆ, ಅದೇ ಇನ್ನೊಂದು ಕೋನದಿಂದ ನೋಡಿದಾಗ ಅನನ್ಯ ಕೌಶಲ್ಯದ ವ್ಯಕ್ತಿಯಾಗಿ ಕಂಡು ಬರುವುದೇ ಪಾತ್ರದ ವೈಶಿಷ್ಟ್ಯ. ಹಾಗಿರುವುಂದಲೇ ಅಂಥ ಪಾತ್ರಗಳಿಗೆ, ವ್ಯಕ್ತಿಗಳಿಗೆ ಅನಂತಮೂರ್ತಿ ಅವರ ಕೃತಿ-ಪ್ರಪಂಚದಲ್ಲಿ ವಿಶೇಷ ಸ್ಥಾನಮಾನ.
ಎರಡು ವಿಭಿನ್ನ ಮೌಲ್ಯ, ಸಂವೇದನೆಗಳ (ಅನಂತಮೂರ್ತಿ ಅವರ ಕೃತಿಗಳಲ್ಲಿ ಪ್ರಧಾನವಾಗಿ ಪರಂಪರೆ ಮತ್ತು ಆಧುನಿಕತೆಯನ್ನು ಪ್ರತಿನಿಧಿಸುವ) ಪ್ರತೀಕಗಳು ಅಥವಾ ಪಾತ್ರಗಳು ಸಂಘರ್ಷಕ್ಕೊಳಗಾದಾಗ, ಆ ಉದ್ವಿಗ್ನ ವಾತಾವರಣದಲ್ಲಿ, ಈ ಬಗೆಯ ಪಾತ್ರವು ತನ್ನ ಹಗುರುತನದಿಂದ ಸಂವಾದ ಹುಟ್ಟಿಸುವ ಶಕ್ತಿ ಪಡೆದಿರುತ್ತದೆ. ವ್ಯಕ್ತಿಗಳ ಸ್ವ-ಪ್ರತಿಷ್ಠೆ, ಅಹಂಕಾರದ ಅಂಧತ್ವದ ಮುಖವಾಡಗಳನ್ನು ಕಿತ್ತೆಸೆದು ಮಾನವೀಯ ಮುಖಗಳನ್ನು ಅನಾವರಣಗೊಳಿಸುವ ಶಕ್ತಿ ಪಡೆದಿರುತ್ತದೆ.
`ಸಂಸ್ಕಾರ'ದ ಪುಟ್ಟ, `ಪ್ರಸ್ತ'ದ ಶ್ಯಾಂಭಟ್ಟರು, `ಸೂರ್ಯನ ಕುದುರೆ'ಯ ವೆಂಕಟ, `ದಿವ್ಯ'ದ ಕೇಶವ ಅನಂತಮೂರ್ತಿಯವರು ಕೆತ್ತಿರುವ ಕೆಲವು ವಿಶಿಷ್ಟ ಹಡೆ ಪಾತ್ರಗಳು.
ಸಂಸ್ಕಾರದ ಪುಟ್ಟ ಪ್ರಾಣೇಶಾಚಾರ್ಯರ ಅಂತರಂಗದಲ್ಲಿ ನಡೆಯುತ್ತಿದ್ದ ಮೌಲ್ಯ ಸಂಘರ್ಷಕ್ಕೆ ಸಾಕ್ಷಿಪ್ರಜ್ಞೆಯಾಗಿ ಬಂದರೆ, `ಪ್ರಸ್ತ'ದ ಶ್ಯಾಂಭಟ್ಟರು ಎಲ್ಲಾ ಸಂಬಂಧಗಳ ನಡುವಿನ ಸೂಕ್ಷ್ಮ ಸಮಸ್ಯೆಗಳನ್ನು ಬಿಡಿಸುವ ಸಂಧಾನಕಾರರಾಗಿ ಬರುತ್ತಾರೆ. ಬಹುತೇಕ ವಿಮರ್ಶಕರು ಈಗಾಗಲೇ ಗುರುತಿಸಿರುವ ಲೇಖಕರ ಸಾಹಿತ್ಯ ಬದುಕಿನ ಎರಡು ಘಟ್ಟಗಳಲ್ಲಿ (ಡಿ.ಆರ್. ನಾಗರಾಜ್ ಬಳಸುವ ಪದಗಳು `ಮೂಲನವ್ಯ' ಮತ್ತು `ಪರಿವರ್ತನಶೀಲ ನವ್ಯ') `ಪುಟ್ಟ' ಮತ್ತು `ಶ್ಯಾಂಭಟ್ಟರು' ಮೊದಲ ಘಟ್ಟಕ್ಕೆ ಸೇರುತ್ತಾರೆ. `ವೆಂಕಟ' ಮತ್ತು `ಕೇಶವ' ಎರಡನೇ ಘಟ್ಟಕ್ಕೆ ಸೇರಿದ ಪಾತ್ರಗಳು. `ವೆಂಕಟ' ತನ್ನ ನಿಷ್ಕ್ರೀಯತೆಯಿಂದ, ತನ್ನ ನಾನ್-ಪಾಲಿಟಿಕಲ್ ಧೋರಣೆಯಿಂದ ಆಧುನಿಕತೆಯನ್ನು ಪ್ರಶ್ನಿಸುವ ಸಂಕೇತವಾಗುತ್ತಾನೆ. `ದಿವ್ಯ'ದ ಕೇಶವ ಕೂಡಾ ಅದೇ ಬಗೆಯ ಸಂಕೇತವಾಗಿ ಘನಶ್ಯಾಮನ ಪಾತ್ರಕ್ಕೆ ಪ್ರತಿದ್ವಂದ್ವಿಯಾಗುತ್ತಾನೆ. ಹೀಗೆ ಎರಡನೇ ಘಟ್ಟದಲ್ಲಿ ಹೆಚ್ಚಾಗಿ ಈ `ಹಡೆ' ಪಾತ್ರಗಳು ಪಾಶ್ಚಾತ್ಯ ಪ್ರಣೀತ ಆಧುನಿಕತೆಯನ್ನು ಪ್ರಶ್ನಿಸುವ ಸಲಕರಣೆಯಾಗಿ ಬಳಸಲ್ಪಡುವಂತೆ ತೋರುತ್ತದೆ.
ಎಲ್ಲದಕ್ಕೂ ಅತೀತನಾಗಿ ಇರುವುದೇ ಆತನ ರಾಜಕಾರಣ ಎಂದು ಅನಂತಮೂರ್ತಿ ಹಲವು ಕಡೆ ಗುರುತಿಸಿದ್ದಾರೆ. ಬಹುಶಃ ಅದೇ ಕಾರಣಕ್ಕೆ ಲೌಕಿಕವಾಗಿ ವರ್ತಿಸುವವರಿಗೆ ಇಂಥವರ ಬಗ್ಗೆ ಭಯ ("ಆದರೆ ಅವನು ಹೇಳದಿದ್ದ ಮಾತುಗಳೆಲ್ಲ ಅವನ ನಗುವಿನಲ್ಲಿ ಇವೆಯೆಂದೆನಿಸಿ ನಾನು ಸೋರಿ ಹೋಗಿಬಿಡಬಹುದೆಂದು ದಿಗಿಲಾಯಿತು": `ಸೂರ್ಯನ ಕುದುರೆಯ' ಅನಂತೂ, ವೆಂಕಟನ ಬಗ್ಗೆ) ಮತ್ತು ಮೆಚ್ಚುಗೆ ("ಈ ಹಡೇ ವೆಂಕಟನೂ ಒಬ್ಬ ಹವಣಿಕೆಯ ರಾಜಕಾರಣಿಯೇ. ಎಂಥ ಮ್ಯಾನಿಪುಲೇಟರ್. ನನ್ನ ಸ್ಥಿತಿಯನ್ನೇ ಬದಲಾಯಿಸಲು ಹವಣಿಸಿದ್ದ"). `ಹಡೆ' ಅನ್ನೋದು ಒಂದು ರೀತಿಯ ರಾಜರ್ಷಿ ಎಂಬ ಭಾರತೀಯ ಪರಿಕಲ್ಪನೆಗೆ ಸಮೀಪವಾದದ್ದು ಎಂದು ಲೇಖಕರು ಭಾವಿಸುವಂತೆ, ನಮಗೆ ಸೂಚಿಸುವಂತೆ ತೋರುತ್ತದೆ. ಅಧಿಕಾರಿ ವಲಯಗಳಲ್ಲಿ ಇದ್ದೂ ಅಧಿಕಾರವನ್ನು ಮೀರಿದ `ರಾಜರ್ಷಿ' ಓರ್ವ ಹೆಚ್ಚಿನ ಘನತೆ ಪಡೆದಿರುವ `ಹಡೆ'.
ಅನಂತಮೂರ್ತಿ ಅವರ ಕೃತಿಗಳಲ್ಲಿ ಇದೇ ಬಗೆಯ ಗುಣಗಳಿರುವ ಸ್ತ್ರೀ ಪಾತ್ರಗಳನ್ನು ನಾವು ಕಾಣುವುದಿಲ್ಲ. ಈ ಕುರಿತು ಹೆಚ್ಚಿನ ಚರ್ಚೆಯ ಅಗತ್ಯವಿದೆ. ಅದೇ ರೀತಿ ಇತರ ಲೇಖಕರು ಈ ಬಗೆಯ ಪಾತ್ರಗಳನ್ನು ಕಾಣುವ ಬಗೆಯ ಕುರಿತೂ ಚರ್ಚೆಯಾಗಬೇಕಿದೆ.
ಕೊನೆಯದಾಗಿ: ಇತ್ತೀಚೆಗೆ ಸ್ನೇಹಿತನ ಜೊತೆ ಚರ್ಚಿಸುತ್ತಿದ್ದಾಗ ಒಂದು ಮಾತು ಬಂತು, ಬಹುಶಃ ಅದೇ ಹಳೇ ಚರ್ಚೆ: `ಸಂಸ್ಕಾರ'ದ ಪ್ರಾಣೇಶಾಚಾರ್ಯ ಪಾತ್ರ ಆಥೆಂಟಿಕ್ ನೇಟಿವ್ ರಚನೆ ಅಲ್ಲ. ವಸಾಹಾತು ಅನುಭವದಿಂದ ಪೀಡಿತ ಲೇಖಕನೊಬ್ಬ ತನ್ನ ಅನುಭವವನ್ನು ಆ ಪಾತ್ರದ ಮೇಲೆ ಆರೋಪಿಸಿದ್ದು ಇತ್ಯಾದಿ. ನಾನು ಹೇಳಿದೆ: ಅದು ಸರಿ. ಇದರ ಮೂಲಕ ಅದು ಮುಂದಿನ ತಲೆಮಾರಿನವರಲ್ಲಿ ನೇಟಿವ್ ಪಾತ್ರ, ಸಂಸ್ಕೃತಿಯ ಬಗ್ಗೆ ತಪ್ಪು ಗ್ರಹಿಕೆಗಳನ್ನು ಹುಟ್ಟಿಸುವ ಸಾಧ್ಯತೆ ಪಡೆದಿರುವ ಅಪಾಯವೇನೋ ಇದೆ, ಆದರೆ ಅದೇ ಕಾರಣದಿಂದ ವಸಾಹಾತು ಅನುಭವ ಪಡೆದ ಅನಂತಮೂರ್ತಿ ಅವರ ತಲೆಮಾರಿಗೂ, ನಂತರದವರಿಗೂ ಅದಕ್ಕಿರುವ ರೆಲೆವನ್ಸ್-ನ್ನು ನಿರಾಕರಿಸಲು ಸಾಧ್ಯವಿಲ್ಲ ಅಂತ. ಅದೇ ರೀತಿ `ದಿವ್ಯ'ದ ಎಷ್ಟೋ ಪಾತ್ರಗಳು ಇನ್ನೊಂದು ಬಗೆಯ, ಮೇಲಿನದ್ದಕ್ಕೆ ತದ್ವಿರುದ್ಧ ಕಾರಣದಿಂದ, ಕೃತಕತೆ ಪಡೆದಿವೆ. ಕೇಶವನಂಥ ಪಾತ್ರಗಳ ಚಿತ್ರಣದಲ್ಲಿ ಆಧುನಿಕ ಬರಹಗಾರನೊಬ್ಬ ಅತಿ-ಪ್ರಜ್ಞಾಪೂರ್ವಕವಾಗಿ ಇವೊತ್ತು ನಮ್ಮ ಸುತ್ತಲೂ ಕಾಣಸಿಗದ ನೇಟಿವ್ ಪಾತ್ರವನ್ನು ಸೃಷ್ಟಿಸಲು ಹೆಣಗುತ್ತಿರುವುದು ನಮಗೆ ಕಾಣ ಸಿಗುತ್ತದೆ. ಪುರಾಣ ಹೇಳುವ `ಕೇಶವ' ಮತ್ತೆ ಪುರಾಣದಲ್ಲಿನ ಪಾತ್ರದಂತೆ ನಮಗೆ ಕಾಣುತ್ತಾನೆಯೇ ಹೊರತು ಇವೊತ್ತಿನ ವಾತಾವರಣದಲ್ಲಿ ಆಥೆಂಟಿಕ್ ಅನಿಸುವುದಿಲ್ಲ. ಆದರೆ ಒಟ್ಟೂ `ದಿವ್ಯ' ಕೃತಿಯ ಆಶಯವೇ `ದೇಸೀ' ಎನ್ನಬಹುದಾದ ಪರಿಭಾಷೆಯಲ್ಲಿ, `ದೇಸೀ' ವಾತಾವರಣವನ್ನೂ, ಪಾತ್ರಗಳನ್ನೂ ಸೃಷ್ಟಿಸುವ ಸಂಕಲ್ಪದಿಂದಲೇ ಬರೆಯಲಾಗಿರುವುದರಿಂದ, ಈ ಎಲ್ಲಾ ಕೃತಕತೆಗೆ ಒಂದು ಬಗೆಯ ಆಥೆಂಟಿಸಿಟಿ ಇದೆ. ವಿಚಿತ್ರವೆಂದರೆ, ಕೇಶವ ಹಾಗೆ ಪೂರ್ತಿ ಪೌರಾಣಿಕ ಪಾತ್ರವಾಗಿ ಓದುಗನಿಗೆ ಕಂಡುಬಂದಿದ್ದರೆ ಲೇಖಕ ತನ್ನ ಆಶಯದಲ್ಲಿ ಗೆದ್ದಂತೆ. ಸಾಹಿತ್ಯಕೃತಿಗಳಲ್ಲಿನ ತಮ್ಮ ಸೈದ್ಧಾಂತಿಕ ಬದ್ಧತೆಗಳಿಂದಾಗಿ ಪೂರ್ವ, ಪಶ್ಚಿಮಗಳನ್ನು ಸರಳೀಕರಣಗೊಳಿಸುವುದು ಅನಂತಮೂರ್ತಿಯವರ ದೌರ್ಬಲ್ಯ. ಪಶ್ಚಿಮವನ್ನು ಗ್ರಹಿಸುವಾಗ, ಪೂರ್ವವನ್ನು ಗ್ರಹಿಸುವ ಕುರಿತಂತೆ ಪಶ್ಚಿಮದ ಬರಹಗಾರರ ಮೇಲೆ ನಾವು ಆರೋಪಿಸುವ `ಓರಿಯೆಂಟಲಿಸ್ಟ್' ಧೋರಣೆಗಳಿಗೆ ಸಮಾನವಾದ, ನಮ್ಮ `ಆಕ್ಸಿಡೆಂಟಲಿಸ್ಟ್' ಧೋರಣೆಗಳನ್ನು ಮೀರಬಲ್ಲ ಕನ್ನಡ ಲೇಖಕನಿಗಾಗಿ ಕಾಯುತ್ತಿದ್ದೇನೆ.
[ಡಾ ಅನಂತಮೂರ್ತಿ ಪ್ರತಿಕ್ರಿಯೆ: ಈ ಲೇಖನದ ಕುರಿತು ಡಾಅನಂತಮೂರ್ತಿಯವರು ನೀಡಿದ ಪ್ರತಿಕ್ರಿಯೆಯನ್ನು ಸಂಗ್ರಹವಾಗಿ ಗ್ರಹಿಸಿ ಇಲ್ಲಿ ಕೊಡುತ್ತಿದ್ದೇನೆ. ದೂರವಾಣಿಯ ಮೂಲಕ ಗ್ರಹಿಸುವಾಗ ನನ್ನಿಂದ ಏನಾದರೂ ಲೋಪವಾಗಿದ್ದಲ್ಲಿ, ಡಾಅನಂತಮೂರ್ತಿ ನನ್ನನ್ನು ಕ್ಷಮಿಸುವರೆಂಬ ನಂಬಿಕೆಯೊಡನೆ. ಹಾಗೇ ದೂರವಾಣಿಯಯ ಆಚೆ ಬದಿಯಲ್ಲಿ ಅವರ ಧ್ವನಿಯಲ್ಲಿದ್ದ ಶಕ್ತಿಯನ್ನೂ, ಅವರಿಗೆ ತಮ್ಮ ಕೃತಿಗಳ ಬಗ್ಗೆ, ಪಾತ್ರಗಳ ಬಗ್ಗೆ, ಒಟ್ಟೂ ಬರವಣಿಗೆಯ ಬಗ್ಗೆ ಇರುವ ಗಟ್ಟಿ ನಂಬಿಕೆಗಳನ್ನೂ ಇಲ್ಲಿ ನನ್ನ ತೊದಲು ಬರಹದಲ್ಲಿ ಧ್ವನಿಸದೇ ಹೋಗಬಹುದು ಎಂಬ ಆತಂಕದೊಡನೆ.]
"ಲೇಖಕನಾಗಿ `ಹಡೆ' ಪಾತ್ರವನ್ನೇ ಆಗಲಿ, ನನ್ನ ಕೃತಿಯ ಇನ್ನಾವುದೇ ಪಾತ್ರವನ್ನಾಗಲಿ ನಾನು ವಿವರಿಸಬಾರದು. ಅದು ಅದರ ವಿಸ್ತಾರವನ್ನು ಸ್ವತಃ ನಾನೇ ಸಂಕುಚಿತಗೊಳಿಸಿದಂತೆ. ಅದು ಓದುಗರಾದ ನಿಮಗೆ ಬಿಟ್ಟದ್ದು. ನಾನು ಅವರು ಹೇಳುವ [ಬಹುಶಃ ಅಕಾಡೆಮಿಕ್ ವಲಯದವರು] ಪೋಸ್ಟ್-ಮಾಡರ್ನಿಸ್ಟ್ ಫ್ಯಾಶನ್ನಿನಲ್ಲಿ ಬರೆಯುವವನಲ್ಲ. ಅನುಭವಕ್ಕೆ, ಅನಿಸಿಕೆಗೆ ಕಂಡದ್ದನ್ನು ಬರೆಯುವವನು. ಇಲ್ಲಿ (ಮುಖ್ಯವಾಗಿ ಪ್ರಾಣೇಶಾಚಾರ್ಯ) ಪಾತ್ರ ಕೃತಕ, ನೇಟಿವ್ ಹೌದೇ ಅಲ್ಲವೇ ಎಂಬ ಚರ್ಚೆಯೇ ಅಸಂಗತ. ಭೈರಪ್ಪನವರ `ಸಾರ್ಥ'ದ ನಾಗಭಟ್ಟನ ಪಾತ್ರದ ಬಗ್ಗೆಯೂ ಹೀಗೆಯೇ ಹೇಳುವವರಿದ್ದಾರೆ. ಆದರೂ ನನ್ನ ಶೈಲಿ ಭೈರಪ್ಪನವರಿಗಿಂತ ತುಂಬಾ ಭಿನ್ನ. ಮೀನಾಕ್ಷಿ ಮುಖರ್ಜಿ ಗುರುತಿಸುವಂತೆ ನನ್ನ ಕೃತಿಗಳು, ಅಲಿಗೊರಿಕಲ್(ರೂಪಕ) ಮತ್ತು ರಿಯಲಿಸ್ಮ್ (ವಾಸ್ತವ) ಹೀಗೆ ಎರಡು ಮಟ್ಟದಲ್ಲಿ ಕೆಲಸಮಾಡುತ್ತವೆ. (ಅದೇ ರೀತಿ ಎರಿಕ್‍ಸನ್ ನನ್ನ ಬರವಣಿಗೆಯನ್ನು ಸ್ವಲ್ಪ ಅರ್ಥ ಮಾಡಿಕೊಂಡಿದ್ದಾರೆ. ನೈಪಾಲನಿಗೂ ಇದೆಲ್ಲಾ ಅರ್ಥವಾಗುವುದಿಲ್ಲ). ಪ್ರಾಣೇಶಾಚಾರ್ಯರ ಪಾತ್ರವನ್ನು ನಾನು `ಮತ್ಸ್ಯಗಂಧಿಯ ಜೊತೆ ಮಲಗಿ ನಡೆದ ಪರಾಶರ'ನನ್ನು ಆಧರಿಸಿದ್ದು. ಅವನು ನಮ್ಮದೇ ಸಂಸ್ಕೃತಿಯವನು. ಅದು ಹೇಗೆ ಪ್ರಾಣೇಶಾಚಾರ್ಯ ಪಾಶ್ಚಾತ್ಯ ಪೀಡಿತನಾದಾನು? `ಕೇಶವ'ನಂಥವರನ್ನೆಲ್ಲಾ ನಾನು ನನ್ನ ಬದುಕಿನಲ್ಲಿ ಕಂಡಿದ್ದೇನೆ. ಹೀಗೆಲ್ಲಾ ಇರುವಾಗ ನೀವು ಸಮಕಾಲೀನ ಎನ್ನುವುದಾದರೂ ಏನನ್ನು? (ನಾನಂತೂ ಸಮಕಾಲೀನನೇ. ಇಂದಿನ ತುರ್ತು ಅಗತ್ಯಕ್ಕೆ ರಾಜ್ಯಸಭೆಯ ಚುನಾವಣೆ ಹೋರಾಡಲೂ ಹಿಂಜರಿಯದವನು.) ಆದುದರಿಂದ ಇದು ನೇಟಿವ್ ಹೌದೇ ಅಲ್ಲವೆ ಎಂಬ ಚರ್ಚೆಗಿಂತ ಹೆಚ್ಚು ವಿಶಾಲವಾಗಿ ಗ್ರಹಿಸಿ. ಅಲ್ಲಲ್ಲಿ ಗ್ರಹಿಸಿದ್ದೀರಿ ಕೂಡಾ. ನಿಮ್ಮ ಹಾಗೆ ಗ್ರಹಿಸುವವರು ವಿರಳ. ಆ ಕಾರಣಕ್ಕಾಗಿ ನಿಮ್ಮ ಬಗ್ಗೆ ನನಗೆ ಅಭಿಮಾನ. ಧನ್ಯವಾದಗಳು."

8 Comments:
ಸುದರ್ಶನ್,
ನಿಮ್ಮ ಲೇಕನ ಓದಿದೆ. ವೈಯಕ್ತಿಕವಾದ ಅನ್ನಿಸಿಕೆಗಳನ್ನು ವಿಮರ್ಶೆಯ ಗುಣಕ್ಕೆ ಒಗ್ಗಿಸುವಂತೆ ಬರೆದಿದ್ದೀರಿ. ಇಂತಹ "ವೈಯಕ್ತಿಕ ಅನ್ನಿಸಿಕೆಗಳ-ಓದಿನ ಅನುಭವ ವ್ಯಾಪ್ತಿ ಹಾಗು ವೈಚಾರಿಕ ಹೊಳಹುಗಳನ್ನು" ತೋರಿಸುವ ಇನ್ನಷ್ಟು ಲೇಕನಗಳು ನಿಮ್ಮಿಂದ ಬರಲಿ.
ಶೇಖರ್‌ಪೂರ್ಣ
ಮೆಚ್ಚುಗೆಯ ಅನಿಸಿಕೆಗಳಿಗೆ ಧನ್ಯವಾದ ಶೇಖರ್. ಇನ್ನಷ್ಟು ಬರೆಯಲು ಪ್ರಯತ್ನಿಸುತ್ತೇನೆ.
ಸುದರ್ಶನರೆ,
ಚರ್ಚೆಗೆ ಟೆರೆದುಕೊಳ್ಳುವ ನಿಮ್ಮ ಲೇಖನ ಓದಿ ಖುಷಿಯಾಯಿತು.
ಸೂಕ್ಷ್ಮಜ್ಞರಾದ, ಚಿಂತನಶೀಲರಾದ ಆಧುನಿಕರ ಹಡೆ ಪಾತ್ರಗಳ ಕುರಿತ ಆಸಕ್ತಿ ಒಂದು ಬಗೆಯ ಅಪಾರಧೀ ಭಾವ ಮತ್ತು ಸ್ಥಿತಿಯ ವಿಮರ್ಶೆಯ ಅವಶ್ಯಕತೆಯೇ ಎಂದು ನನಗೆ ಅನುಮಾನವಿದೆ. ಇದನ್ನು, ಕೇವಲ ಒಂದು ಅಬ್ಸರ್ವೇಶನ್-ಆಗಿ ಹೇಳುತ್ತಿದ್ದೇನೆ. ಅಲ್ಲದೇ, ಹಡೆ ಪಾತ್ರಗಳ ಕುರಿತ ನಿಮ್ಮ ಡೆಫನೆಶನ್ ಗಮನಿಸಿದರೂ ಹೀಗನ್ನಿಸದೇ ಇರದು. (ಈ ಅವಶ್ಯಕತೆಯ ಧ್ವನಿ ನಿಮ್ಮ ಲೇಖನದಲ್ಲಿಯೇ ಇದೆ ಅನ್ನಿಸುತ್ತೆ). ಆದರೆ, ಈ ಒಟ್ಟೂ ಪ್ರಕ್ರಿಯೆಯ ಸೂತ್ರದಾರ ಆದುನಿಕನೇ ಎನ್ನುವುದೂ ಮುಖ್ಯವೆನ್ನಿಸುತ್ತದೆ. ಅಂದರೆ, ಈ ಗುರುತಿಸುವಿಕೆಯಲ್ಲೇ ಆಧುನಿಕತೆಯ ಪಾತ್ರವಿದೆ. ಆದರೂ, ಇದು ನನಗೆ ಪೂರ್ತಿಯಾಗಿ ಸ್ಪಷ್ಟವಾಗಿಲ್ಲ.
ಹಡೆ ಪಾತ್ರವೇ ಆಗಲಿ, ಪ್ರಾಣೇಶಾಚಾರ್ಯರಂತಹ ಪಾತ್ರವೇ ಆಗಲಿ ಅವು ಅಥೆಂಟಿಕ್ ಹೌದೋ ಅಲ್ಲವೋ ಎನ್ನುವುದಕ್ಕಿಂತಾ ಅವು ಸಂಸ್ಕೃತಿಯಲ್ಲಿ ಸಾಧ್ಯವೋ ಅಲ್ಲವೋ ಎನ್ನುವುದು ಹೆಚ್ಚು ಮುಖ್ಯ. ಇದೊಂದು ರೀತಿಯಲ್ಲಿ ಈ ಸಾಧ್ಯತೆಯಿರುವ ಸಂಸ್ಕೃತಿಯ ಹೆಗ್ಗಳಿಕೆ ಮತ್ತ್ಟು ಅಡನ್ನು ಗುರುತಿಸಬಲ್ಲ, ಸೃಜನಶೀಲವಾಗಿ ಬಳಸಿಕೊಳ್ಳಬಲ್ಲ ಸಾಹಿತಿಯ ಹೆಗ್ಗಳಿಕೆ. (ಸಂಸ್ಕೃತಿಯ ಅನೇಕ ಧಾರೆಗಳು ಸೇರಿ ಈ ಹಡೆ ಪಾತ್ರದ ಸೃಷ್ಟಿಯಾಗಿದೆ.) ಈ ಕುರಿತು ನಿಮ್ಮ ವಿವರಣೆಯನ್ನು ನಾನು ಒಪ್ಪುತ್ತೇನೆ.
ಸ್ತ್ರೀ ಪಾತ್ರಗಳ ಕುರಿತು ಹೇಳುವುದಾದರೆ, ಅನಂತಮೂರ್ತಿಯವರ ಕಾದಂಬರಿಗಳಲ್ಲಿ ಮೇಲೆ ಹೇಳಿದ 'ಅವಶ್ಯಕತೆ'-ಯನ್ನು ಹೆಚ್ಚು ಅಥೆಂಟಿಕ್-ಆಡ ಸ್ತ್ರೀ ಪಾತ್ರಗಳು ಪೂರೈಸುತ್ತವೆ ಮತ್ತವುಗಳು ಹಡೆಯಾಗಬೇಕಾದ ಅವಶ್ಯಕತೆಯೇ ಇಲ್ಲವೇನೋ ಅನ್ನಿಸುತ್ತೆ. ಅಂದರೆ ಅವರ ಕೆಲ ಸ್ತ್ರೀ ಪಾತ್ರಗಳು ಸಂಸ್ಕೃತಿಯಲ್ಲಿ ಕೇವಲ ಸಾಧ್ಯಟೆಯಷ್ಟೇ ಅಲ್ಲದೇ ನಿಜವಾಗಿ ಕಾಣಸಿಗುತ್ತಾರೆ. ಈ ನನ್ನ ಗಮನ ನಿಜವಾದ್ದರೆ ಇದೂ ಸಹ ನಮ್ಮ ಸಂಸ್ಕೃತಿಯ ಬಗ್ಗೆ ಪರೋಕ್ಷ್ಯವಾಗಿ ಒಂಡು ಟೀಕೆಯಾಗುತ್ತಡೆ ಎಂದೆನ್ನಿಸುತ್ತೆ. ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತೇನೆ. ನನ್ನದು ತೀರಾ ಹೈಪಾಥಿಸಿಸ್ ಎನ್ನುವುದರ ಅರಿವಿದೆ.
ಆದರೆ, ಹಡೆ ಪಾತ್ರಗಳು ಸಂಪೂರ್ಣ ಯಶಸ್ವಿ ಹೌದೇ ಅಲ್ಲವೇ ಎನ್ನುವುದರ ಬಗ್ಗೆ ನನಗೆ ಅಷ್ಟೊಂದು ಖಚಿತತೆಯಿಲ್ಲ. ಅಂದರೆ, ಆಧುನಿಕತೆಯ ಪರಿಪೂರ್ಣ ಟೀಕೆ ಒದಗಿಸುತ್ತೋ ಅಲ್ಲವೋ ಎನ್ನುವ ಬಗ್ಗೆ.
ಇಂತಿ
ಶಿವು
ಶಿವು ಅವರೇ,
`ಹಡೆ' ಪಾತ್ರಗಳತ್ತ ಗಮನ ಅಪರಾಧೀಭಾವದಿಂದ ಹುಟ್ಟಿರಬಹುದೆಂಬ ನಿಮ್ಮ ಅನಿಸಿಕೆ ಅಷ್ಟು ಸರಿಯಲ್ಲವೆನ್ನಿಸುತ್ತದೆ. ಪಶ್ಚಿಮ ಯುರೋಪ್ ಮತ್ತು ಉತ್ತರ ಅಮೇರಿಕೆಯ ಪ್ರಾಟೆಸ್ಟಂಟ್ ಜನಾಂಗಗಳಲ್ಲಿ ಈ ಶತಮಾನದಲ್ಲಿ ಲೌಕಿಕ ಮತ್ತು ಅಧಿಕಾರ ನಿರಾಸಕ್ತ, `ರಾಜಕೀಯ' ಪ್ರಜ್ಞೆಯಿಲ್ಲದ ಮನುಷ್ಯರು ಸಿಗುವುದು ಕಷ್ಟವೇ ಅನಿಸುತ್ತದೆ. ಆಧುನಿಕತೆಯಿಂದ ದೂರ ಉಳಿಯಬಯಸುವ ಆಮಿಶ್-ನಂತಹ ಜನಾಂಗದಲ್ಲಿ ಸಿಗಬಹುದೇನೋ. ಆದ್ರೂ `ಹಡೆ' ಅನ್ನೋದು ನಮ್ಮ ಸಂಸ್ಕೃತಿಗೆ ವಿಶಿಷ್ಟವಾದ(ಯಾವುದೇ ಧರ್ಮಕ್ಕೂ ಸೇರಬಲ್ಲ) ಇನ್ನೂ ಹಲವು ವಿಷೇಷ ಲಕ್ಷಣಗಳಿಂದ ಕೂಡಿದ ಗುಣ ಅನಿಸುತ್ತದೆ. ಅನಂತಮೂರ್ತಿ ಅವರ ದಟ್ಟ ಚಿತ್ರಣದಿಂದಾಗಿ ಅವರೆಲ್ಲಾ ಮಲೆನಾಡು, ಕರಾವಳಿ ಪ್ರದೇಶಕ್ಕೆ ಸೇರಿರಲೇಬೇಕು ಎಂದು ನಮಗೆನಿಸುವ ಸಾಧ್ಯತೆ ಇದೆ. ಅಂದರೆ ಅವರ ಕೈಯಲ್ಲಿ `ಹಡೆ' ಅನ್ನೋದು ಇನ್ನಷ್ಟು ಸ್ಪೆಸಿಫಿಕ್ ಆಗಿದೆ.
ಸ್ತ್ರೀ ಪಾತ್ರದ ಕುರಿತು ನಿಮ್ಮ ಅನಿಸಿಕೆಯನ್ನು ಒಪ್ಪುತ್ತೇನೆ. `ಹಡೆ'ಯ ಲಕ್ಷಣಗಳಿಲ್ಲದೇ ಆ ಪಾತ್ರಗಳು ಪಾಶ್ಚತ್ಯೀಕೃತ ಆಧುನಿಕರನ್ನು ವಿಮರ್ಶಿಸುತ್ತವೆ. ಅಂಥಾ ಸ್ತ್ರೀ ಪಾತ್ರಗಳನ್ನು ನೀವು ಈಗಲೂ ಕಾಣುವಿರಾದರೆ ಅದನ್ನು ನಮ್ಮ ಸಂಸ್ಕೃತಿಯ ಟೀಕೆ ಎಂದೇಕೆ ನೀವು ಭಾವಿಸುತ್ತೀರಿ ಎಂಬುದನ್ನು ವಿವರಿಸುವಿರಾ?
`ಹಡೆ' ಪಾತ್ರದಂಥ, ಈ ರೀತಿಯ ತೀರಾ ವಿರುದ್ಧವಾದ (ರ್‍ಯಾಡಿಕಲ್ ಅನಿಸುವ) ಪಾತ್ರಗಳನ್ನು ಆಧುನಿಕ-ನಿಗೆ ಪ್ರತಿದ್ವಂದ್ವಿಯಾಗಿಸುವುದಕ್ಕಿಂತಾ, ಸಂಸ್ಕೃತಿಯ ಆಳವಾದ ಪ್ರಜ್ಞೆಯುಳ್ಳ ಧೀಮಂತ ಹಿರಿಯ ಪಾತ್ರಗಳನ್ನು ಇನ್ನಷ್ಟು ಸಮೃದ್ಧವಾಗಿ ಲೇಖಕರು ತಮ್ಮ ಕೃತಿಗಳಲ್ಲಿ ಬಳಸಿಕೊಳ್ಳಬಹುದಿತ್ತು ಎನಿಸುತ್ತದೆ. ಪೂರ್ವ-ಪಶ್ಚಿಮದ ಸರಳ ಚಿಂತನೆಗಳು ಹುಟ್ಟಿಸುವ ಕೃತಕತೆ-ಯನ್ನು ಇತ್ತೀಚಿನ ಕೃತಿಗಳಿಗಿಂತ ಹೆಚ್ಚು ಅರ್ಥಪೂರ್ಣವಾಗಿ ತಮ್ಮ ಹಳೆಯ ಕೃತಿಯಾದ `ಅವಸ್ಥೆ'ಯಲ್ಲಿ ಮೀರಿದ್ದಾರೆ. ಅಂದ್ರೆ ಪಶ್ಚಿಮದ ಬಗ್ಗೆ ಪ್ರಸ್ತಾಪಿಸದೇ ಪಶ್ಚಿಮವನ್ನು ವಿಮರ್ಶಿಸಬಲ್ಲ ಶಕ್ತಿ ಆ ಕೃತಿಗಿದೆ. ಕಾಲದ ತುರ್ತಿನಿಂದಾಗಿ ಲೇಖಕರಿಗೆ ಇತ್ತೀಚೆಗೆ ಪಶ್ಚಿಮವನ್ನು ನೇರವಾಗಿ ಪ್ರಸ್ತಾಪಿಸಿ ವಿಮರ್ಶಿಸುವ ಹಟ ಹುಟ್ಟಿದಂತೆ ತೋರುತ್ತದೆ.
ಸುದರ್ಶನರೆ,
ಬರೆಯುವ ಧಾವಂತದಲ್ಲಿ ಸ್ವಲ್ಪ ವಿವರಣೆ ಕಡಿಮೆಯಾಗಿ ಅಪಾರ್ಥಕ್ಕೆ ಎಡೆಯಾಯಿತು, ಕ್ಷಮೆಯಿರಲಿ.
ನಾನು ಟೀಕೆ ಎಂದದ್ದು ನೇತ್ಯಾತ್ಮಕವಾಗಲ್ಲ. ಈ ಮಹತ್ತರವಾದ ಮುಖಾಮುಖಿಯನ್ನು ನಿರ್ವಹಿಸುವ ಸಂದರ್ಭದಲ್ಲಿ ಸ್ತ್ರೀ ಪಾತ್ರಗಳು ಸಂಸ್ಕೃತಿಯೊಳಗೇ ಸಹಜವಾಗಿ ಸಿಗುವುದು, ಪುರುಷ ಪಾತ್ರಗಳನ್ನು 'ಹಡೆ' ಎನ್ನುವ ಪರಿಕಲ್ಪನೆ/ಸಾಧ್ಯತೆಯಡಿ ಸೃಷ್ಟಿಸಬೇಕಾಗುವುದು, ನಮ್ಮ ಸಂಸ್ಕೃತಿಯ ಬಗ್ಗೆ ವಿಶೇಷವಾದದ್ದೇನೋ ಸೂಚಿಸುತ್ತಿರಬಹುದು ಎಂದಿತ್ತು ನನ್ನ ಧ್ವನಿ. ಇದು, ನಮ್ಮ ಸ್ತ್ರೀಯರ ಜೀವನಶ್ರೀಮಂತಿಕೆ ಎನ್ನಬಹುದೇ? ಗೊತ್ತಿಲ್ಲ.
ಸರಳೀಕರಣದ ಅಪಾಯವಿದ್ದೂ, ಈ ಮಾತನ್ನಾಡುತ್ತೇನೆ. 'ಸೂರ್ಯನ ಕುದುರೆಯಲ್ಲಿ' ಆಧುನಿಕ 'ನಾನು' ಆಗಿದ್ದಾನೆ. ವಂಕಟ ಜೋಯ್ಸ ಏಕೆ 'ನಾನು' ಆಗಲಿಲ್ಲ ಎನ್ನುವ ವಿತಂಡ ವಾದ ಯಾಕೋ ಮನಸ್ಸಿನಲ್ಲಿ ಮೂಡುತ್ತಿದೆ. ಕಥೆಯಲ್ಲಿ, ಒಟ್ಟು ಹಡೆ ಪಾತ್ರವನ್ನು ಅರ್ಥಮಾಡಿಕೊಳ್ಳಬೇಕು ಎನ್ನುವ ಹವಣಿಕೆ ಆಧುನಿಕನದ್ದಾಗಿದೆ. ವೆಂಕಟ ಜೋಯ್ಸನಿಗೆ ಅದೆಲ್ಲಾ ಅಷ್ಟಿದ್ದಂತಿಲ್ಲ. ಆದ್ದರಿಂದಲೇ, ನನ್ನ ಮನಸ್ಸಿನಲ್ಲಿ 'ಸೂಕ್ಷ್ಮ ಆಧುನಿಕನ ಅಪರಾಧೀಭಾವ' ಎನ್ನುವ ಆಲೋಚನೆ ಬಂದದ್ದು. ಅದು, ನನಗೇ ಅಷ್ಟು ಖಾತರಿಯಿಲ್ಲ.
'ಅವಸ್ಥೆ'ಯ ಬಗ್ಗೆ ನೀವು ಗಮನಿಸಿರುವುದು ನನಗೂ ಉಚಿತವೆನ್ನಿಸುತ್ತಿದೆ.
ಇಂತಿ
ಶಿವು
ಹಡೆ ಪಾತ್ರಗಳದೂ ಒಂದು ಬಗೆಯ ರಾಜಕಾರಣ ಅನ್ನುವ ಮಾತು ಇದೆಯಲ್ಲ, ಅದು ನಿಜ ಇದ್ದೀತು. ಆದರೆ ಹಡೆಗಳು ಮಾತಿನಲ್ಲಿ ಕಟ್ಟಿಕೊಳ್ಳುವ ಸಾಹಿತ್ಯದ ಲೋಕದಲ್ಲಿ ಅಷ್ಟೇ ಮುಖ್ಯರಾಗಿ, ನಾವು ನಿಜವೆಂದುಕೊಳ್ಳುವ ಬದುಕಿನಲ್ಲಿ ಕ್ಷುದ್ರರಾಗಿ ಕಾಣುವ ವಿಪರ್ಯಾಸವೂ ಇದೆಯಲ್ಲವೇ! ಇಂಥ ಹಡೆಗಳು ತೇಜಸ್ವಿ, ಕುವೆಂಪು ಕಥಾ ಲೋಕದಲ್ಲೂ ಕಾಣುತ್ತಾರೆ. ಮಹಾಭಾರತದ ಉತ್ತರ ಕುಮಾರ ಕೂಡ ಒಂದು ಬಗೆಯ ಹಡೆಯೇ. ನಿಮ್ಮ ಹಡೆ ಪಾತ್ರಗಳ ವಿಶ್ಲೇಷಣೆಯನ್ನು ಇನ್ನು ಕೊಂಚ ವಿವರ ಮತ್ತು ವಿಸ್ತಾರಗೊಳಿಸಿದರೆ ಉಪಯೋಗವಾಗುತ್ತದೆ.
ನಾಗ
ನಾಗ ಅವರೇ,
ನಿಮ್ಮ ಮಾತುಗಳನ್ನು ಒಪ್ಪುತೇನೆ. ಧಾವಂತದಲ್ಲಿ, ಧೀರತನದಲ್ಲಿ ಮೈ-ಮರೆತವರನ್ನು ಸಾಹಿತ್ಯಲೋಕ ಈ `ಹಡೆ' ಪಾತ್ರಗಳತ್ತ ಗಮನಿಸುವತ್ತ ಸಂವೇದನಾಶೀಲರನ್ನಾಗಿಸುವ ಪ್ರಯತ್ನ ಮಾತ್ರ ಮಾಡಬಲ್ಲದು ಎನಿಸುತ್ತದೆ. ನೀವು ಸೂಚಿಸಿದಂತೆ ತೇಜಸ್ವಿ, ಕುವೆಂಪು ಅವರ ಪಾತ್ರಗಳು (ಮಂದಣ್ಣ ಇತ್ಯಾದಿ), ಮಹಾಭಾರತದ ಉತ್ತರ (ಕುಮಾರವ್ಯಾಸ ಆದಿಯಾಗಿ ವಿಭಿನ್ನ ಲೇಖಕರ ದೃಷ್ಟಿಯಲ್ಲಿ) ಇವರೆಲ್ಲರನ್ನೂ ಪರೀಶೀಲಿಸಬಹುದು. ಈ ವಿಶ್ಲೇಷಣೆಯನ್ನು ವಿಸ್ತರಿಸುವಂತೆ ನಿಮ್ಮಂತೆ ಇನ್ನೂ ಹಲವರು ಸೂಚಿಸಿದ್ದಾರೆ. ನನ್ನ ಮಟ್ಟಿಗೆ ಪ್ರಯತ್ನಿಸುತ್ತೇನೆ ಎಂದಷ್ಟೆ ಹೇಳಬಲ್ಲೆ. ಅಂಥ ವಿಸ್ತರಣೆಗೆ ಈ ಚರ್ಚೆ ಎಲ್ಲರಿಗೂ ಮುಕ್ತವಾಗಿದೆ ಎಂದು ವ್ಯಕ್ತವಾಗಿ ಹೇಳಬೇಕಿಲ್ಲವಾದರೂ ವಿನಯದಿಂದ ನೆನಪಿಸಬಯಸುತ್ತೇನೆ.
ಇಂತಿ,
-ಸುದರ್ಶನ
ನನ್ನ ಪಾತ್ರಗಳೂ ಸಹ ಭೈರಪ್ಪನವರ ಪಾತ್ರಗಳನ್ನು ಹೋಲುತ್ತವೆ ಎ೦ದು ಹೇಳಿರುವ ಅನ೦ತಮೂರ್ತಿಗಳ ಅನಿಸಿಕೆ ನಗು ತರಿಸುತ್ತದೆ. ಘ್ನಾನಪೀಠಿಗಳು ತಮ್ಮನ್ನು ಭೈರಪ್ಪನವರೊ೦ದಿಗೆ compare ಮಾಡಿಕೊಳ್ಳುತ್ತಿರುವದು ಅವರ ಅಭಿಮಾನಿಗಳಿಗೆ ಖುಷಿ ಕೊಡುತ್ತದೊ ಇಲ್ಲವೋ ಭೈರಪ್ಪನವರನ್ನು ಮೆಚ್ಚುವವರಿಗೆ ಹಾಸ್ಯಾಸ್ಪದವಾಗಿಯ೦ತೂ ಕಾಣುತ್ತದೆ.
Post a Comment
<< Home