`ಭೂತ' ಮತ್ತು ಪ್ರಶಸ್ತಿಯ ಗರಿ ಗೆದ್ದ `ತೇರು'.
ನೈಪಾಲರು ಭಾರತಕ್ಕೆ ಬಂದಾಗಲೆಲ್ಲಾ ಹೆಡ್‍ಮಾಸ್ಟರ್‍ನಂತೆ ನಮ್ಮ ಮೇಲೆ ಗುಡುಗಿ ಹೋಗುತ್ತಾರೆ. "ನಿಮ್ಮಲ್ಲಿ ಸೃಜನಶೀಲತೆ ಇಲ್ಲ, ಸ್ವಂತಿಕೆ ಇಲ್ಲ, ಕೊಲೊನಿಯಲ್ ದೂಷಣೆಯ ಮಂತ್ರ ಜಪಿಸೋದು ನಿಲ್ಸಿ, ಭೂತವನ್ನು ಬೀಸಾಕಿ..." ಇತ್ಯಾದಿ. ಅವರು ಯಾವುದೋ ಒಂದು ಪಕ್ಷದ(ಆ ಪಕ್ಷದಲ್ಲಿ ಅವರವಿಚಾರಗಳ ಸೂಕ್ಷ್ಮ ಹೊಳಹುಗಳನ್ನೆಲ್ಲಾ ಗ್ರಹಿಸುವ ಸಾಮರ್ಥ್ಯವಿರುವ ಮಂದಿ ಬೆರಳಣಿಕೆಯವರು ಮಾತ್ರ..ಆ ಮಾತು ಬೇರೆ.) ಕ್ಯಾಂಪ್-ನಲ್ಲಿ ಕೂತು ಇದನ್ನೆಲ್ಲಾ ಹೇಳುತ್ತಾರೆ ಎಂಬ ಕಸಿವಿಸಿ ನಮಗಿದ್ದರೂ, ನೈಪಾಲರು ಇದನ್ನೆಲ್ಲಾ ನೇಟಿವ್ ಮೇಲಿನ ಪ್ರೀತಿಯಿಂದಲೇ ಹೇಳುತ್ತಾರೆ ಎಂಬುದು ಪೂರ್ತಿ ಸುಳ್ಳಲ್ಲ. ನೈಪಾಲ್‍ರ ಮಾತುಗಳ ಹಿಂದೆ ಅವರ ಪಾಶ್ಚಾತ್ಯ ಶಿಕ್ಷಣ, ಅನುಭವ ಎಲ್ಲಾ ಆ ಗಾಜಿನ ಹಿಂದೆ ಕೆಲಸ ಮಾಡಿರುತ್ತದೆ. ಇರಲಿ..
ಆದರೆ ಭೂತವನ್ನು ಬೀಸಾಕುವುದು ನೈಪಾಲ್‍ರಿಗೆ ಸುಲಭವಾದಷ್ಟು, ನಮಗಲ್ಲ. ಗೋಪಾಲಕೃಷ್ಣ ಅಡಿಗರಿಗೆ 'ಹುಗಿದ ಹಳಬಾವಿಯೊಳ ಕತ್ತಲ ಹಳಸು ಗಾಳಿ ಅಂಬೆಗಾಲಿಟ್ಟು, ತೆವಲುತ್ತೇರಿ, ತುಳಸಿ-ವೃಂದಾವನಕ್ಕೂ ಹಾಯ್ದು, ತೊಟ್ಟು ಕಳಚಿದ ಹೊಕ್ಕುಳಿನ ಬಳ್ಳಿ, ಕತ್ತರಿಸಿದಿಲಿಬಾಲವಾಗಿ' ಕಂಡದ್ದು. ಆದರೂ ಬಿಡದ ಕರ್ಮ, 'ಪುರೋಹಿತರನ್ನು ನಂಬಿ ಪಶ್ಚಿಮ-ಬುದ್ಧಿಯವರಾದೆಯೋ' ಎಂಬ ಹಳಹಳಿಕೆ, `ಇನ್ನಾದರೂ ಪೂರ್ವದ ಕರ್ಮಕಾಂಡಗಳನ್ನಗೆದು, ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ ಚಿನ್ನದದಿರು ಕಂಡೀತು, ಅದರಿಂದ ಇಷ್ಟವಿಗ್ರಹ ಕೆತ್ತೇವು' ಎಂಬ ಆಶಾಭಾವ. ಚಂದ್ರಶೇಖರ ಕಂಬಾರರಿಗೆ ಅದು ಯಾವತ್ತೂ ಇಲ್ಲೇ ನಮ್ಮಲ್ಲೇ ಇರುವ ಕರಿಮಾಯಿ, ಜೋಕುಮಾರ ಸ್ವಾಮಿಯ ಪಡವಲಕಾಯಿ, ಎಷ್ಟೇ ಆಧುನಿಕರೆಂದು ತೋರಿಸಿಕೊಳ್ಳುವವರೂ ಕದ್ದುಮುಚ್ಚಿ ಆಸೆಪಡುವ ಉಪ್ಪು,ಖಾರ,ಹುಳಿ. ಆಧುನಿಕೋತ್ತರ ಲೇಖಕ ವಿವೇಕ ಶಾನಭಾಗರಿಗೂ ಅದು ಪೋಸ್ಟ್ ಲಿಬರಲೈಜೇಶನ್ ಕಾಲದ ಕಶ್ಯಪನಿಗೂ, ಕಾಶೀಶ ಕಾರವಾರದಿಂದ ಮುಂಬೈಗೆ ಭೂತಕ್ಕೆ ಬೆನ್ನು ತಿರುಗಿಸಿ ಓಡೇನೆಂದರೂ ಬಿಡದ ಟ್ರಕ್ಕಿನಲ್ಲಿ ತುಂಬಿದ ಮೀನಿನ ವಾಸನೆ.
ನಮ್ಮ ಇನ್ನೊಬ್ಬ ಆಧುನಿಕೋತ್ತರ ಲೇಖಕ ರಾಘವೇಂದ್ರ ಪಾಟೀಲರ `ತೇರು' ಕೃತಿಗೆ ಈ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿಯ ಗರಿ ಸಿಕ್ಕಿದೆ. ತನ್ನ ಸಮುದಾಯದ ಒಟ್ಟು ಅಭ್ಯುದಯಕ್ಕಾಗಿ ತೇರಿನ ರಕ್ತ-ತಿಲಕದ ಸೇವೆಯನ್ನೂ ಸೇರಿ ಇನ್ನೂ ಇತರ ಮೌಢ್ಯಗಳ ವಿರುದ್ಧ ಬಂಡಾಯವೇಳುವ ಪಾಟೀಲರ ದ್ಯಾವಪ್ಪನಿಗೂ ಭೂತದಿಂದ ಅಷ್ಟೆನೂ ಸುಲಭದ ಮುಕ್ತಿಯಿಲ್ಲ.
ರಾಘವೇಂದ್ರ ಪಾಟೀಲರಿಗೆ ಅಭಿನಂದನೆಗಳು.

0 Comments:
Post a Comment
<< Home